For Queires: 9480280401 / 08183-265476 (available from 11:00 am to 7:00 pm)

Welcome to Akshara Prakashana Website!

ಸ್ಮೃತಿ-ವಿಸ್ಮೃತಿ: ಭಾರತೀಯ ಸಂಸ್ಕೃತಿ

Availability: Out of stock

Rs.415.00

ಸ್ಮೃತಿ-ವಿಸ್ಮೃತಿ: ಭಾರತೀಯ ಸಂಸ್ಕೃತಿ</p>
        </div>

        <div class=

Details

ತೀರಾ ಚುಟುಕಾಗಿ ಈ ಗ್ರಂಥದ ವಾದದ ತಿರುಳನ್ನು ತಿಳಿಸಬಹುದಾದರೆ ಹೀಗೆ ಹೇಳಬಹುದು: ರಿಲಿಜನ್ನು ಮಾನವ ಸಂಸ್ಕೃತಿಗಳಿಗೆ ಸಾಮಾನ್ಯವಾದ ಲಕ್ಷಣವಲ್ಲ. ಅಂದರೆ, ಎಲ್ಲಾ ಸಂಸ್ಕೃತಿಗಳಲ್ಲೂ ಒಂದಿಲ್ಲೊಂದು ರಿಲಿಜನ್ನು ಇರಲೇ ಬೇಕೆಂದೇನೂ ಇಲ್ಲ. ಎಲ್ಲಾ ಸಂಸ್ಕೃತಿಗಳಲ್ಲೂ ರಿಲಿಜನ್ನು ಇರುತ್ತದೆಯೆಂಬುದು ಐರೋಪ್ಯ ಸಂಸ್ಕೃತಿಯ ನಿರಾಧಾರವಾದ ನಂಬಿಕೆ. ಉದಾಹರಣೆಗೆ ಭಾರತೀಯ ಸಂಸ್ಕೃತಿಯಲ್ಲಿ ರಿಲಿಜನ್ ಇದೆಯೆಂಬುದು ಒಂದು ಅಸೈದ್ಧಾಂತಿಕ ಹೇಳಿಕೆ. ಈ ಗ್ರಂಥವು ಅಷ್ಟನ್ನೇ ಹೇಳಿಮುಗಿಸುವುದಿಲ್ಲ. ಇದರ ಜೊತೆಗೇ, ‘ಐರೋಪ್ಯರಿಗೆ ರಿಲಿಜನ್ನು ಎಲ್ಲೆಡೆಯಲ್ಲೂ ಇರುವಂತೇ ಕಾಣಲು ಕಾರಣವೇನು? ಈ ರಿಲಿಜನ್ನನ್ನು ಕಾಣುವ ಪ್ರಕ್ರಿಯೆಯು ಹೇಗೆ ನಡೆಯುತ್ತದೆ? ಹಾಗೂ ಈ ಸಮಸ್ಯೆಗೂ ನಮ್ಮ ಸಂಸ್ಕೃತಿ ಅಧ್ಯಯನಕ್ಕೂ ಏನು ಸಂಬಂಧ?’ ಎಂಬ ವಿಷಯವನ್ನೂ ಚರ್ಚಿಸುತ್ತದೆ. ಈ ಮೇಲಿನ ವಾದವು ಭಾರತೀಯ ಸಂಸ್ಕೃತಿಯ ಸಂದರ್ಭಕ್ಕಷ್ಟೇ ಮಹತ್ವದ್ದಲ್ಲ, ಇದು ಭಾರತೀಯ ಸಮಾಜಕ್ಕೆ ಸಂಬಂಧಿಸಿದಂತೆ ಯಾವುದೇ ಸಿದ್ಧಾಂತಗಳನ್ನು ಬೆಳೆಸಲಿಕ್ಕೂ ಹೊಸದಾರಿಗಳನ್ನು ತೆರೆಯಬಲ್ಲದು.

 

"ಬಾಲಗಂಗಾಧರರು ನಮ್ಮ ಮುಂದಿಡುವ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳಲು ನಮಗೆ ಸಾಧ್ಯವೇ ಇಲ್ಲ."

-ವಿವೇಕ ಧಾರೇಶ್ವರ, ಬೆಂಗಳೂರು

 

"ರಿಲಿಜನ್ನಿನ ಅಧ್ಯಯನವು ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಹುಟ್ಟಿದೆ ಎಂಬ ಅರಿವನ್ನು ಸೆಕ್ಯುಲರ್ ಲೋಕಕ್ಕೆ ಮನದಟ್ಟು ಮಾಡುವ ಮೂಲಕ ಬಾಲಗಂಗಾಧರರು ಒಂದು ಅಮೂಲ್ಯ ಸೇವೆಯನ್ನು ಸಲ್ಲಿಸಿದ್ದಾರೆ ಹಾಗೂ ರಿಲಿಜನ್ನು ಮತ್ತು world viewಗಳು ಸಾಂಸ್ಕೃತಿಕವಾಗಿ ಸಾರ್ವತ್ರಿಕವಾಗಿವೆ ಎಂದು ಭಾವಿಸಿಕೊಳ್ಳುವಾಗ ವಿದ್ವಾಂಸರು ಎಚ್ಚರವಹಿಸಬೇಕೆಂಬುದನ್ನು ನೆನೆಪಿಸಿಕೊಟ್ಟಿದ್ದಾರೆ."

-ಫಿಲಿಪ್ ಸಿ. ಆಲ್ಮಂಡ್

ದಿ ಯೂನಿವರ್ಸಿಟಿ ಆಫ್ ಕ್ವೀನ್ಸ್‌ಲ್ಯಾಂಡ್, ಆಸ್ಟ್ರೇಲಿಯಾ

 

"ಇದನ್ನು ಫಿಲಾಸಫಿಯೆನ್ನಬೇಕೇ? ರಿಲಿಜನ್ನೆನ್ನಬೇಕೆ? ಮಾನವಶಾಸ್ತ್ರವೆನ್ನಬೇಕೆ? ಇಲ್ಲ ಬೌದ್ಧಿಕ ಇತಿಹಾಸವೆನ್ನಬೇಕೆ? ಇವುಗಳ ನಡುವೆ ನಾವು ಗುರುತಿಸುವ ವ್ಯತ್ಯಾಸವು ಎಷ್ಟು ಕೃತಕವೆಂಬುದನ್ನು ‘ಸ್ಮೃತಿ-ವಿಸ್ಮೃತಿ: ಭಾರತೀಯ ಸಂಸ್ಕೃತಿ’ ಮತ್ತೊಮ್ಮೆ ನಿದರ್ಶಿಸಿದೆ. ಅತ್ಯುತ್ತಮ ಸೃಜನಶೀಲ ಕೃತಿಯೊಂದು ಹೇಗೆ ಅಧ್ಯಯನ ಪ್ರಕಾರಗಳ ನಡುವಿನ ಶಿಷ್ಟಾಚಾರದ ಅಡ್ಡಗೋಡೆಗಳನ್ನು ದಾಟುತ್ತದೆ ಎಂಬುದಕ್ಕೆ ಇದೊಂದು ದೃಷ್ಟಾಂತ."

-ಡೇವಿಡ್ ಲೇ

ಬುನ್ಯೋ ಯೂನಿವರ್ಸಿಟಿ, ಜಪಾನ್

 

"ಬಾಲಗಂಗಾಧರರ ಕೃತಿಯಲ್ಲಿ ಪಾಶ್ಚಾತ್ಯ ವಿದ್ವತ್ತಿನ ವಿಮರ್ಶೆಗಿಂತಲೂ ಹೆಚ್ಚಿನದೇನೋ ಇದೆ: ಅದು ಪಾಶ್ಚಾತ್ಯ ಸಂಸ್ಕೃತಿಯನ್ನೇ ವಿಮರ್ಶೆಗೊಡ್ಡುತ್ತದೆ. ಈ ದೃಷ್ಟಿಯಿಂದ ಅದು ಉಂಟುಮಾಡಬಹುದಾದ ಪರಿಣಾಮವನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಳ್ಳಬೇಕಾಗುತ್ತದೆ."

-ಡೇವಿಡ್ ಎ. ಪೈಲಿನ್

ಯೂನಿವರ್ಸಿಟಿ ಆಫ್ ಮ್ಯಾಂಚಿಸ್ಟರ್, ಯು.ಕೆ.

 

"ಬಾಲಗಂಗಾಧರರ ಆಕರ್ಷಕವಾದ, ಸತ್ವಪೂರ್ಣವಾದ ಈ ಗ್ರಂಥವು ಒಂದು ಅಮೂಲ್ಯ ಕೊಡುಗೆ... ಅದರಲ್ಲೂ ಸೆಕ್ಯುಲರ್ ಅಭಿಪ್ರಾಯಗಳು ರಿಲಿಜನ್ನಿನ ವ್ಯಾಖ್ಯಾನದೊಳಗಿನಿಂದ ಆಕಾರತೆಳೆದು ಅದರೊಳಗೇ ನಿರಂತರವಾಗಿ ಮರುನಿರೂಪಣೆಗೊಳ್ಳುತ್ತಿರುವುದನ್ನು ನಿದರ್ಶಿಸುವ ಅಧ್ಯಾಯಗಳಲ್ಲಂತೂ ಅವರ ವಾದವನ್ನು ಒಪ್ಪಿಕೊಳ್ಳದೇ ವಿಧಿಯಿಲ್ಲ."

-ನೋ‌ಅಮಿ ಆರ್. ಗೋಲ್ಡನ್‌ಬರ್ಗ್

ಯೂನಿವರ್ಸಿಟಿ ಆಫ್ ಒಟಾವ, ಕೆನಡಾ

Additional Information

Name in English Smruti-Vismruti: Bharatiya Samskruti
ಲೇಖಕರ ಹೆಸರು ಎಸ್.ಎನ್. ಬಾಲಗಂಗಾಧರ
Author Name S.N. Balagangadhara
Translator/Editor Rajaram Hegde
ಅನುವಾದಕ/ಸಂಪಾದಕ ರಾಜಾರಾಮ ಹೆಗಡೆ
Weight (in grams) 773.0000
No. of Pages 572
Year of Publication 2010
Binding Paperback
Size of Book (in inches) 8.8" x 5.8"
Table of Contents Not available.

Free Content Not available.