For Queires: 9480280401 / 08183-265476 (available from 11:00 am to 7:00 pm)

Welcome to Akshara Prakashana Website!

ನಾಟ್ಯಶಾಸ್ತ್ರ

Availability: In stock

Rs.580.00
OR

ನಾಟ್ಯಶಾಸ್ತ್ರ</p>
        </div>

        <div class=

Details

ಸುಮಾರಾಗಿ ಕ್ರಿಸ್ತಪೂರ್ವ ೨ ಮತ್ತು ಕ್ರಿಸ್ತಶಕ ೨ನೆಯ ಶತಮಾನಗಳ ನಡುವೆ ರಚಿತವಾಯಿತೆಂದು ನಂಬಲಾಗಿರುವ ‘ನಾಟ್ಯಶಾಸ್ತ್ರ’ವು ಭಾರತದ ರಂಗಸಂಪ್ರದಾಯಗಳೆಲ್ಲದಕ್ಕೂ ಆಕರಗ್ರಂಥವೆಂದೂ ಜಗತ್ತಿನಲ್ಲೇ ಮೊದಲಬಾರಿಗೆ ರಂಗಮಾಧ್ಯಮವನ್ನು ಶಾಸ್ತ್ರೀಯವಾಗಿ ಸೂತ್ರೀಕರಿಸಿದ ಮಹತ್ವದ ಕೋಶವೆಂದೂ ಪ್ರಸಿದ್ಧವಾಗಿದೆ.ಈ ಬೃಹತ್ ಕೋಶವು, ತನ್ನ ಮೂವತ್ತಾರು ಅಧ್ಯಾಯಗಳ ವ್ಯಾಪ್ತಿಯಲ್ಲಿ, ನಾಟ್ಯದ ಉಗಮದಿಂದ ಆರಂಭಿಸಿ ಅದರ ಉಪಯೋಗದವರೆಗೆ ರಂಗಮಾಧ್ಯಮದ ವಿವಿಧ ಆಯಾಮಗಳನ್ನು ಕುರಿತು ಪ್ರಸ್ತಾಪಿಸುತ್ತದೆ.ನಾಟ್ಯಮಂಟಪದ ಸ್ವರೂಪ ಮತ್ತು ನಿರ್ಮಾಣದಿಂದ ತೊಡಗಿ ಕಣ್ಣುಗುಡ್ಡೆಗಳ ಸೂಕ್ಷ್ಮಾತಿಸೂಕ್ಷ್ಮ ಅಭಿನಯಗಳವರೆಗೆ ಅಸಂಖ್ಯಾತ ವಿವರಗಳನ್ನು ಇಲ್ಲಿ ಸಿದ್ಧಾಂತೀಕರಿಸಿ ವರ್ಣಿಸಲಾಗಿದೆ. ಜತೆಗೆ, ಸಂಗೀತ-ಛಂದಸ್ಸು-ಕಾವ್ಯಮೀಮಾಂಸೆ ಮೊದಲಾದ ಹಲವು ಸಂಬಂಧಿತ ಕ್ಷೇತ್ರಗಳ ತುಂಬ ಉಪಯುಕ್ತವಾದ ಮಾಹಿತಿಗಳು ಕೂಡಾ ಇಲ್ಲಿ ಲಭ್ಯವಿವೆ.‘ಜಗತ್ತಿನ ಎಲ್ಲ ಕಲೆಗಳೂ ನಾಟ್ಯದಲ್ಲಿ ಸಮಾಗಮಗೊಂಡಿವೆ’ -- ಎಂದು ‘ನಾಟ್ಯಶಾಸ್ತ್ರ’ವು ಉಲ್ಲೇಖಿಸುವುದು ಈ ಅರ್ಥದಲ್ಲಿಯೇ. ಹೀಗೆ, ಪ್ರಾಚೀನ ಭಾರತದ ಹಲವು ಕಲಾ ಪ್ರಕಾರಗಳ ವಿಶ್ವಕೋಶ ಎನ್ನಬಹುದಾದ ಈ ಬೃಹತ್ ಗ್ರಂಥವನ್ನು ಪ್ರಸ್ತುತ ಕನ್ನಡಾನುವಾದವು ವಿದ್ಯಾರ್ಥಿ-ವಿದ್ವಾಂಸರಿಬ್ಬರಿಗೂ ಉಪಯುಕ್ತವಾಗುವಂತೆ ಸರಳವಾಗಿ ಪುನರ್‌ನಿರೂಪಿಸುತ್ತದೆ.

Additional Information

Name in English Natyashastra
ಲೇಖಕರ ಹೆಸರು ಆದ್ಯ ರಂಗಾಚಾರ್ಯ (ಶ್ರೀರಂಗ)
Author Name Adya Rangacharya (Sriranga)
Translator/Editor No
ಅನುವಾದಕ/ಸಂಪಾದಕ No
Weight (in grams) 804.0000
No. of Pages 366
Year of Publication 1st Edition- 1984, 4th Edition- 2017
Binding Hardback
Size of Book (in inches) 9.8" x 7.5"
Table of Contents Not available.

Free Content Not available.