Product Code: 191
Availability: 91

Limited time offer

₹500.00 ₹700.00

ವೈದೇಹಿಯವರು ಕಾವ್ಯ, ನಾಟಕ, ಕಾದಂಬರಿ, ಪ್ರಬಂಧ ಮೊದಲಾದ ಹಲವು ಪ್ರಕಾರಗಳಲ್ಲಿ ಬರೆದಿದ್ದಾರಾದರೂ ಅವರ ಬರಹದ ಬದುಕಿನ ಉದ್ದಕ್ಕೂ ಬಹು ಸಂಖ್ಯೆಯಲ್ಲಿ ಪ್ರಕಟವಾಗಿರುವುದು ಕಥೆಗಳು. ೧೯೭೯ರಲ್ಲಿ ಅವರ ಮೊದಲ ಕಥಾಸಂಕಲನ `ಮರ ಗಿಡ ಬಳ್ಳಿ' ಪ್ರಕಟವಾಗಿದ್ದರೆ, ಈಚೆಗೆ ೨೦೧೬ರಲ್ಲಿ ಅವರ ಕಥಾಸಂಕಲನ `ಕತೆ ಕತೆ ಕಾರಣ' ಪ್ರಕಟಗೊಂಡಿದೆ. ಈ ಎರಡು ಸಂಕಲನಗಳೂ ಸೇರಿ ಒಟ್ಟು ಏಳು ಕಥಾಸಂಕಲನಗಳಲ್ಲಿ ಅವರು ೨೦೧೬ರವರೆಗೆ ಒಟ್ಟು ತೊಂಬತ್ತೊಂದು ಕಥೆಗಳನ್ನು ಪ್ರಕಟಿಸಿದ್ದಾರೆ. ಸಾಹಿತ್ಯದ ವಿದ್ಯಾರ್ಥಿಗಳು, ಓದುಗರು ಮತ್ತು ಅಭ್ಯಾಸಕರ ಅನುಕೂಲಕ್ಕಾಗಿ ಪ್ರಸ್ತುತ ಸಂಗ್ರಹವು ಅವರ ಈವರೆಗಿನ ಎಲ್ಲ ಕತೆಗಳನ್ನು ಒಟ್ಟಾಗಿ ಹೊರತರುತ್ತಿದೆ.

ಸಮಕಾಲೀನ ಲೇಖಕರನ್ನು ಮೆಚ್ಚುವುದು ಕಷ್ಟ. ಬರೆಯುವ ನನ್ನಂಥವನಿಗೂ ಬೇರೆ ಬರಹಗಾರರಿಗೂ ನಡುವೆ ತಿಳಿವಳಿಕೆ, ಸ್ನೇಹ ಇತ್ಯಾದಿಯೆಲ್ಲ ಇರಬಹುದು. ಅವೆಲ್ಲಕ್ಕಿಂತ ಹೆಚ್ಚಾಗಿ ಸ್ಪರ್ಧೆ, ಸವಾಲು ಇರುತ್ತದೆ. ಇವು ಅನೇಕ ಸಲ ಅಸೂಯೆಯ ಮಟ್ಟಕ್ಕಿಳಿಯುತ್ತವೆ. ಆದರೆ ನಾನು ನಿಜಕ್ಕೂ ಕಂಡ ನನ್ನ ಕಾಲದ ಒಳ್ಳೆಯ ಲೇಖಕರು ನನ್ನಲ್ಲಿ ಅಚ್ಚರಿ, ಹೊಸ ಗ್ರಹಿಕೆ ಹುಟ್ಟಿಸುತ್ತಾರೆ. ಬರೆಯುವ ಹೆಮ್ಮೆಯನ್ನು ಹೆಚ್ಚಿಸುತ್ತಾರೆ. ಅಂಥವರಲ್ಲಿ ವೈದೇಹಿ ಒಬ್ಬರು.

- ಪಿ. ಲಂಕೇಶ್

(`ಈಕೆಯ ಕ್ರಿಯಾಶೀಲ ಲೇಖನಿ'ಟೀಕೆ ಟಿಪ್ಪಣಿ ಸಂಪುಟ ೧)

Attributes
Number of pages 804
Year of Publication 2018
Author ವೈದೇಹಿ
Translator / Editor