ಅಕ್ಷರ ಪ್ರಕಾಶನ, ಹೆಗ್ಗೋಡು
ಈ-ಪುಸ್ತಕ ಯೋಜನೆ

ಅಕ್ಷರ ಪ್ರಕಾಶನದ ಪುಸ್ತಕಗಳನ್ನು ಹಲವು ಮಾರಾಟಗಾರರು ಈ-ಪುಸ್ತಕಗಳಾಗಿ ಪರಿವರ್ತಿಸಿ ಮಾರಾಟ ಮಾಡುತ್ತಿದ್ದರಾದರೂ ಸ್ವತಃ ಅಕ್ಷರ ಪ್ರಕಾಶನವು ಈ-ಪುಸ್ತಕಗಳ ನಿರ್ಮಾಣಕ್ಕೆ ಕೈ ಹಾಕಿರಲಿಲ್ಲ. ಈಗ ಪ್ರಕಾಶನವು ತನ್ನದೇ ಇಂಥ ಪುಸ್ತಕ ನಿರ್ಮಾಣ ಮತ್ತು ಮಾರಾಟಗಳ ಯೋಜನೆಗೆ ಅಡಿಯಿಡುತ್ತಿದೆ. ಇದರ ಅಂಗವಾಗಿ ಅಕ್ಷರ ಪ್ರಕಾಶನದಿಂದ ಈವರೆಗೆ 150 ಈ-ಪುಸ್ತಕಗಳು ಆಕರ್ಷಕವಾದ ಮತ್ತು ಬೇರೆಬೇರೆ ಗಣಕ-ಟ್ಯಾಬ್‌-ಫೋನ್‌ಗಳಲ್ಲಿ ಸರಿಯಾಗಿ ಬಳಸಲು ಬರುವಂಥ ವಿನ್ಯಾಸದಲ್ಲಿ ಹೊರಬಂದಿದ್ದು, ಗೂಗಲ್ ಪ್ಲೇಬುಕ್ಸ್‌ ಅಂತರ್ಜಾಲ ತಾಣದಲ್ಲಿ ಜಗತ್ತಿನಾದ್ಯಂತ ನೇರ ಕೊಳ್ಳಲು ಲಭ್ಯವಾಗಿವೆ.
ಗೂಗಲ್ ಪ್ಲೇಬುಕ್ಸ್‌ ಅಂತರ್ಜಾಲ ತಾಣದ ಲಿಂಕ್ ಕೆಳಗಿದೆ. ಅಕ್ಷರ ಪ್ರಕಾಶನದ ಅಂತರ್ಜಾಲತಾಣ (www.aksharaprakashana.com) ದಲ್ಲೂ ಈ ಲಿಂಕ್‌ಗಳನ್ನು ಕೊಡಲಾಗಿದೆ. 


ಇನ್ನೂ ಹಲವು ಪುಸ್ತಕಗಳು ಈ-ಪುಸ್ತಕ ರೂಪದಲ್ಲಿ ಬರಲಿಕ್ಕಿವೆ; ಮುದ್ರಿತ ಆವೃತ್ತಿಯಲ್ಲಿ ಮಾರಾಟಕ್ಕಿಲ್ಲದ ಹಳೆಯ ಉಪಯುಕ್ತ ಪುಸ್ತಕಗಳೂ ಇದರಲ್ಲಿ ಸೇರಿರುತ್ತವೆ.


Akshara Prakashana, Heggodu
E-books Project

Some of the books published by Akshara Prakashana were available as e-books on various web-shops, produced and marketed by those sellers. Now, Akshara Prakashana has begun to make its own e-books, with attractive layout, compatible with all computers, tabs and phones. 150 such e-books are now on sale across the globe at Google Playbooks, at the link given below.  These links are also available at our web bookshop: www.aksharaprakashana.com.

There will be more e-books from us, which will also include old and rare books that are not available in the print version.