Product Code: 45
Availability: 94
₹50.00

ಖಂಡಕಾವ್ಯ ಗ.ಸು. ಭಟ್ಟರಿಗೆ ಇಷ್ಟವಾದ, ಇವರಿಗೆ ಕರತಲಾಮಲಕವಾದ ಕಾವ್ಯ ಪ್ರಕಾರ... ಈ ಕಥನಕವನದ ‘ಹುಳು’ಬಾಣಭಟ್ಟನ ಕಾದಂಬರಿಯ ಗಿಳಿಯ ಹಾಗೆ ಸೊಗಸಾಗಿ ಕತೆಯನ್ನು ನಿರೂಪಿಸುತ್ತದೆ.

-ಡಾ| ಮುರಳೀಧರ ಉಪಾಧ್ಯ (ಮುನ್ನುಡಿಯಿಂದ)

ಈ ನೀಳ್ಗವಿತೆ ಒಂದು ಕಥನಕಾವ್ಯ... ಇಲ್ಲಿಯ ಕಥೆಯಲ್ಲಿ ಮುಗ್ಧತೆ ಮತ್ತು ವಾಸ್ತವದ ನಿರಂತರ ಒಡನಾಟ ಮತ್ತು ಸಂಘರ್ಷದ ಚಿತ್ರಣವಿದೆ.

-ಡಾ| ಚಿಂತಾಮಣಿ ಕೊಡ್ಲೆಕೆರೆ (ಮುನ್ನುಡಿಯಿಂದ)

ಪದಲಾಲಿತ್ಯ ಹಾಗೂ ಛಂದೋವಿನ್ಯಾಸಗಳನ್ನು ಒಳಗೊಂಡ ದೀರ್ಘ ಕಥನಕವನಗಳನ್ನು ಎಕ್ಕುಂಡಿಯವರ ನಂತರ ನಾವು ಕಾಣುವುದು ಗ.ಸು. ಭಟ್ಟರಲ್ಲಿಯೇ.

-ಡಾ| ಸಿ.ಎನ್. ರಾಮಚಂದ್ರನ್‌

ಕನ್ನಡದಲ್ಲಿ ಕಥನಕಾವ್ಯದ ಕಥೆ ಮುಗಿಯಿತು ಎನ್ನುವಾಗ ಆ ಬಗೆಯ ರಚನೆಗಳನ್ನು ಮಾಡಿ ಸಹೃದಯದ ಗಮನ ಸೆಳೆದ ಕವಿ ಗ.ಸು. ಭಟ್ಟರು.

-ಡಾ| ಎಚ್.ಎಸ್. ವೆಂಕಟೇಶಮೂರ್ತಿ

ಭಟ್ಟರ ರಚನೆಗಳು ನಮ್ಮ ಕಾಲದ ಕನ್ನಡ ಸಾಹಿತ್ಯದ ವೈವಿಧ್ಯ ಮತ್ತು ಶ್ರೀಮಂತಿಕೆಗಳ ಹೆಚ್ಚಳಕ್ಕೆ ತಮ್ಮದೇ ಕಾಣಿಕೆ ನೀಡಿವೆ.

-ಪ್ರೊ| ಓ.ಎಲ್. ನಾಗಭೂಷಣಸ್ವಾಮಿ

Attributes
Author ಗ.ಸು. ಭಟ್ಟ ಬೆತ್ತಗೇರಿ
Translator / Editor
Number of pages 72
Year of Publication 2011