Product Code: 221
Availability: 3
₹650.00

ಆತ್ಮಕಥೆಯನ್ನು ಐದು ಅಥವಾ ಹತ್ತು ವರ್ಷಕ್ಕೊಮ್ಮೆ ಬರೆಯತೊಡಗಿದರೆ ಭಾಷೆಯಂತೂ ಬದಲಾಗುತ್ತದೆ, ಜೊತೆಗೆ ತನಗೇ ತಿಳಿಯದಂತೆ ಸತ್ಯದ ಸ್ವರೂಪ ಕೂಡಾ ಬದಲಾಯಿಸಬಹುದಲ್ಲವೆ? ನಾನು ಮೊದಲಿನಿಂದ ಸುಳ್ಳು ಹೇಳುತ್ತಾ ಬಂದಿದ್ದೇನೆ. ಆ ಸುಳ್ಳಿನಿಂದ ಇನ್ನೊಬ್ಬರಿಗೆ ತೊಂದರೆಯಾಗುವುದಿಲ್ಲವೆಂಬ ನನ್ನದೇ ಆದ ಭರವಸೆಯೂ ಇರುತ್ತಿತ್ತು. ಅದಕ್ಕೇ ಈ ಇಳಿ ವಯಸ್ಸಿನಲ್ಲಿ ನನಗೆ ಸುಳ್ಳು ಮತ್ತು ಸತ್ಯಗಳ ಭೇದವೇ ಮರೆತುಹೋಗಿದೆ! ನನ್ನ ಈ ದೀರ್ಘ ಜೀವನದ ಬಗೆಗೆ 'ಉಳಿದವರು' ಏನು ತಿಳಿದುಕೊಂಡಿದ್ದಾರೋ ಅದೇ ನನ್ನ ಕಥೆ. ಆದರೆ ಈ ಉಳಿದವರಲ್ಲಿ ನಾನೂ ಒಬ್ಬನಾಗಿದ್ದೇನೆ! ಆದ್ದರಿಂದ ವ್ಯಕ್ತಿಯ ಆತ್ಮಕಥೆ ಒಂದು ಅಧಿಕೃತವಾಣಿಯಾಗುತ್ತದೆ.

ಬಿ.ವಿ. ಕಾರಂತ

(ಆತ್ಮಕಥನಕ್ಕೆ ಬರೆದುಕೊಂಡ ಟಿಪ್ಪಣಿಗಳಿಂದ)

Attributes
Author ಬಿ.ವಿ. ಕಾರಂತ
Translator / Editor ವೈದೇಹಿ
Number of pages 598
Year of Publication 1st Edition- 2003, 2nd Edition- 2013, 1st Akshara Prakashana Edition- 2021