Product Code: 67
Availability: 88
₹75.00

ಶಿವರಾಮ ಕಾರಂತರ ಸರಸೊತಿ-ಪಾರೊತಿಯರಂತೆ, ಎಂ. ಕೆ. ಇಂದಿರಾ ಅವರ ಫಣುಯಮ್ಮನಂತೆ, ತಮಗೆದುರಾದ ಆತಂಕ, ದುರಂತ, ನಿಸ್ಸಹಾಯಕತೆಗಳನ್ನೇ ಅಸ್ತಿವಾರ ಬಂಡೆಯಾಗಿ ಪರಿವರ್ತಿಸಿ ಸೇವೆ ಶುಷ್ರೂಷೆಗಳಲ್ಲಿ ತಮ್ಮನ್ನು ತೇಯ್ದುಕೊಂಡ ಸನ್ಯಾಸಿನಿಯರ ಅತ್ಯಾಧುನಿಕ ಮಾದರಿ ಈ ಕುಸುಮಕ್ಕ.

-ಕೆ. ವಿ. ಸುಬ್ಬಣ್ಣ

ತ್ಯಾಗ ಮತ್ತು ಸೇವೆಗೆ ಕೊಡಬಹುದಾದ ಯಾವುದೇ ಪ್ರಶಸ್ತಿಗೂ ಅವರು ಅರ್ಹರು.

-ಡಾ. ಶಿವರಾಮ ಕಾರಂತ

ಭತ್ತದ ಒಂದು ಹಿಡಿಸೂಡಿನಂತಿದ್ದ ಆ ಕೃಶದೇಹದೊಳಗೆ ಚೈತನ್ಯದ ಅದೆಷ್ಟು ಬೀಜಗಳಿದ್ದುವೋ!

-ರಂಜಾನ್ ದರ್ಗಾ

ವಿಧಿ ಆಕೆಗೆ ವಿದ್ಯೆ, ವಿವೇಕ, ಬಹುಮುಖಿ ಪ್ರತಿಭೆ, ಛಲ ಅಲ್ಲವನ್ನೂ ಕೊಟ್ಟರೂ ಅವರ ಅರ್ಹತೆಗೆ ತಕ್ಕ ಮರಣವನ್ನು ಕೊಡಲಿಲ್ಲ. ಎಷ್ಟೆಲ್ಲ ಹೋರಾಟಗಳಲ್ಲಿ ಸಾವಿಗೆ ಸವಾಲು ಹಾಕಿದವರು ಅವರು. ಕಗ್ಗಾಡಿನ ಕಿರುರಸ್ತೆಯಲ್ಲಿ, ಕೈಗಾ ಗುಂಡಿಯಲ್ಲಿ, ಶರಾವತಿಯ ಜಲಧಾರೆಯಲ್ಲಿ, ಪೋಲೀಸರ ಕಾರ್ಯಾಚರಣೆಯಲ್ಲಿ, ಮರಕಟುಕರ ದಾಳಿಯಲ್ಲಿ, ಜೈಲಿನಲ್ಲಿ, ಉಪವಾಸ ಸತ್ಯಾಗ್ರಹದಲ್ಲಿ ಸಾವು ಅವರ ಬಳಿ ಸುಳಿಯಲೂ ಧೈರ್ಯ ಮಾಡದೆ ಹೀಗೆ ಹೆದ್ದಾರಿಯಲ್ಲಿ ಹೊಂಚು ಹಾಕಿ ಸೆಳೆದೊಯ್ಯಬೇಕಿತ್ತೆ?

-ಸತ್ಯವ್ರತ

Attributes
Author ನಾಗೇಶ ಹೆಗಡೆ, ಶಾರದಾ ಗೋಪಾಲ
Translator / Editor
Number of pages 139
Year of Publication 1999
Related Products