ಕರುಣಾಳು
Product Code: 183
Availability: 91
Availability: 91
₹55.00
ಕಸದ ತೊಟ್ಟಿಯಲಿ ಹಸುಗೂಸು
ಇನ್ನೂ ಇನ್ನೂ
ಹರಿದಂತಿಲ್ಲ ತಾಯಮಾಸು
ಜನಸಂದಣಿಯನು ತೂರಿ
ನಿಡಿದಾದ ತೋಳುಗಳ ಚಾಚಿ
ಬಾಚಿದಳು ಮಿಷನ್ ಆಸ್ಪತ್ರೆಯ ಮೇರಿ
ಗುಸಗುಸ ಪಿಸಪಿಸ
ಅವಳಿನ್ನೂ ಕುಮಾರಿ!
ಮುದ್ದನುಕ್ಕಿಸುತಿದೆ ಹಸುಗೂಸು
ಸಂಶಯವೇ ಇಲ್ಲ ಬಾಲಯೇಸು
ಕಂಡಳು, ಎತ್ತಿಕೊಂಡಳು
ಎದೆಗೆ ಒತ್ತಿಕೊಂಡಳು
ತಾಯಿ ಅವಳು ಕರುಣಾಳು.
Attributes | |
Author | ಸವಿತಾ ನಾಗಭೂಷಣ |
Translator / Editor | |
Number of pages | 50 |
Year of Publication | 2016 |