Product Code: 204
Availability: 41
₹80.00

Qty

Click below to buy eBook version from Google Play Store

ನಾಟಕದ ಮುಖ್ಯಪಾತ್ರವು ಒಂದು ಸನ್ನಿವೇಶದಲ್ಲಿ ಆಡುವ ಮಾತು ಹೀಗಿದೆ:

ನಾಟ್ಯ ಅಂದರೆ ಏನು ಅಂತ ಅಂದುಕೊಂಡಿದೀಯಇವತ್ತು ನಮ್ಮ ಎದುರಿಗೆ ಇರೋದನ್ನು ಇರೋ ಹಾಗೇ ಅಷ್ಟಿಷ್ಟು ಉಪ್ಪುಖಾರ ಹಾಕಿ ತೋರಿಸಿದರೆ ಅದಕ್ಕೆ ನಾಟ್ಯ ಅನ್ನೋದಕ್ಕೆ ಬರ್‍ತದೆಯಾಅಥವಾ, ಇದರ ಉಸಾಬರೀನೇ ಬೇಡ ಅಂತ, ಹಳೆಗಾಲದ ಒಂದು ಪುರಾಣದ ಕಥೆ ಎತ್ತಿಕೊಂಡು ಅದರಲ್ಲಿ ಇವತ್ತಿನ ಅರ್ಥ ಹೊರಡಿಸೋಕೆ ತಿಣುಕಾಡಿದರೆ, ಅದು ನಾಟಕ ಆಗತದೆಯಾಎರಡೂ ಅಲ್ಲ. ಇವತ್ತು ಮತ್ತು ಅವತ್ತು - ಎರಡೂ ಕಾಲಗಳಲ್ಲಿ ಎರಡು ಕಾಲನ್ನೂರಿಕೊಂಡು, ಇವತ್ತು ಆಗಿರೋದನ್ನ, ಆಗದೇ ಇರೋದನ್ನ, ಆಗಬಹುದಾದ್ದನ್ನ, ಆಗಬೇಕು ಅಂತ ಅನ್ನಿಸೋದನ್ನ, ಆಗಲಿ ಅಂತ ಕನಸು ಕಾಣೋದನ್ನ - ಎಲ್ಲವನ್ನೂ ಒಂದೇ ಪಟ್ಟಿಗೆ ಕೈಲಾಸ ಪರ್ವತದ ಬುಡಕ್ಕೇ ಕೈಹಾಕಿ ಎತ್ತಿದಹಾಗೆ ಮೇಲೆತ್ತಬೇಕು, ಮತ್ತೆ, ಗೋವರ್ಧನಗಿರಿಯ ಹಾಗೆ ಕಿರುಬೆರಳಿನ ತುದಿಗೆ ಲೀಲಾಜಾಲವಾಗಿ ನಿಲ್ಲಿಸಿ ಆಡಿಸಬೇಕುಅದು ನಾಟ್ಯ... ಮತ್ತೆ, ಇಷ್ಟು ಸಂಕಲ್ಪ ಇದ್ದ ಮಾತ್ರಕ್ಕೆ ಒಳ್ಳೆಯ ನಾಟ್ಯ ಹುಟ್ಟಿಬಿಡತದೆ ಅಂತಲೂ ಭ್ರಮೆ ಪಡಬಾರದು ಅನ್ನು... ಸಂಕಲ್ಪವನ್ನು ಸಾಕ್ಷಾತ್ಕಾರ ಮಾಡೋ ಕಾರಯಿತ್ರೀ ಮತ್ತು ಇಂಥ ಸಾಧನೆಯನ್ನು ಸಾವಧಾನದಿಂದ ಕಾಣುವ ಭಾವಯಿತ್ರೀ - ಎರಡೂ ಪ್ರತಿಭೆಗಳು ಕೂಡಿದರೆ, ಅದು ಹುಟ್ಟೀತು; ಹುಟ್ಟಿದರೆ, ಅದು ನಮ್ಮ ಕಾಲದ ಪುಣ್ಯ!

Attributes
eBook https://play.google.com/store/books/details/Akshara_K_V_Paramapadasopaanapata?id=xK0DEAAAQBAJ
Author ಅಕ್ಷರ ಕೆ.ವಿ.
Number of pages 68
Year of Publication 2020