Product Code: 210
Availability: 34
₹110.00

Qty

Click below to buy eBook version from Google Play Store

ರೊದ್ದಂ ನರಸಿಂಹ ಅವರ ಆಯ್ದ ಬರಹಗಳ ಅನುವಾದ

ಇಲ್ಲಿರುವ ರೊದ್ದಂ ನರಸಿಂಹ ಅವರ ಮೂರು ಲೇಖನಗಳು ವಿಜ್ಞಾನ ಮತ್ತು ಸಂಸ್ಕೃತಿಯ ತೌಲನಿಕ ಸಂಬಂಧ ಕುರಿತ ಬರಹಗಳಲ್ಲ; ಇವು ವಿಜ್ಞಾನದೊಳಗೇ ಅಂತರ್ಗತವಾಗಿರುವ ‘ಸಂಸ್ಕೃತಿಗಳನ್ನೂ’ ವಿಜ್ಞಾನ-ನಾಗರಿಕತೆ-ಇತಿಹಾಸ-ಸಂಸ್ಕೃತಿ - ಇವುಗಳ ಹಿಂದಿರುವ ವಿಶಾಲ ಭಿತ್ತಿಯನ್ನೂ ಅನಾವರಣಗೊಳಿಸುವ ಆಕಾಂಕ್ಷೆಯಿಂದ ಉದ್ಯುಕ್ತವಾಗಿವೆ. ಬೇರೆಬೇರೆ ಸಂಸ್ಕೃತಿಗಳು ಯಾಕೆ ವಿಭಿನ್ನ ರೀತಿಯ ವಿಜ್ಞಾನಗಳನ್ನು ರೂಪಿಸಿಕೊಂಡಿವೆ? ಭಾರತದಲ್ಲಿ ಆಧುನಿಕ ವಿಜ್ಞಾನವು ಯಾಕೆ ಬೆಳೆದುಕೊಳ್ಳಲಿಲ್ಲ? - ಎಂಬಿತ್ಯಾದಿ ಪ್ರಶ್ನೆಗಳಿಗೆ ಸಾಂಪ್ರದಾಯಿಕವಾಗಿ ಕೊಡಲಾಗುವ ಕಾರಣಗಳನ್ನು ಬದಿಗಿಟ್ಟು, ಜ್ಞಾನಶಾಸ್ತ್ರೀಯ ನೆಲೆಯಿಂದ, ಸೌಂದರ್ಯ ಮೀಮಾಂಸೆ ಎನ್ನಬಹುದಾದ ನೆಲೆಯಿಂದ, ಉತ್ತರಗಳನ್ನು ಹುಡುಕುವುದು ಈ ಬರಹಗಳ ವಿಶೇಷ. ಈ ಕಾರಣದಿಂದಲೇ ಈ ಬರಹಗಳು ಸಾದಾ ವಿಜ್ಞಾನ ಲೇಖನಗಳಾಗದೆ ಬೌದ್ಧಿಕ ಚಿಂತನೇತಿಹಾಸದ ರೋಚಕ ಯಾತ್ರೆಯೂ ಆಗುತ್ತವೆ.

Attributes
eBook https://play.google.com/store/books/details/Roddam_Narasimha_Vijnaana_Samskriti?id=xWn2DwAAQBAJ
Author ರೊದ್ದಂ ನರಸಿಂಹ
Translator / Editor ಅಕ್ಷರ ಕೆ.ವಿ.
Number of pages 104
Year of Publication 1st Edition- 2005. 2nd Edition- 2021