ಸಂಸ್ಕಾರ
Product Code: 37
Availability: 98
Availability: 98
₹110.00
‘ಸಂಸ್ಕಾರ’ ಕನ್ನಡ ನವ್ಯ ಸಾಹಿತ್ಯದ ಅಪೂರ್ವ ಸಿದ್ಧಿಗಳಲ್ಲೊಂದಾಗಿದೆ. ನವ್ಯ ಸಾಹಿತ್ಯದ ಕೆಲವು ಮೂಲಭೂತ ಪ್ರವೃತ್ತಿಗಳ ಸಮರ್ಥ ಆವಿಷ್ಕಾರ ಇದರಲ್ಲಿದೆ. ಹಳೆಯ ಸಂಸ್ಕಾರಗಳನ್ನು ಒರೆಗೆ ಹಚ್ಚಿ ನೋಡಿ, ಸತ್ವಹೀನವಾದವುಗಳನ್ನು ಕಳಚಿ ಒಗೆದು, ದ್ವಂದ್ವಕ್ಕೆ ಘರ್ಷಣೆಗೆ ದುಃಖಕ್ಕೆ ಅಳುಕದೆ, ಧೈರ್ಯದಿಂದ ಪ್ರಾಮಾಣೀಕತೆಯಿಂದ ಹೊಸ ಮೌಲ್ಯಗಳನ್ನು ಅನ್ವೇಷಿಸುವ ಪ್ರವೃತ್ತಿ ನವ್ಯಪ್ರಜ್ಞೆಯ ಮೂಲಸ್ವರೂಪವೆಂದು ಪರಿಗಣಿಸಬಹುದಾದರೆ, ಅದು ‘ಸಂಸ್ಕಾರ’ದ ವಸ್ತುವಿನಲ್ಲಿಯೂ, ನಾಯಕ ಪ್ರಾಣೇಶಾಚಾರ್ಯರ ಚರಿತ್ರೆಯಲ್ಲಿಯೂ, ಕತೆ ಹೇಳುವ ರೀತಿಯಲ್ಲಿಯೂ, ಭಾಷೆಯಲ್ಲಿಯೂ ಮೊದಲಿನಿಂದ ಕೊನೆಯವರೆಗೆ ಪರಿಣಾಮಕಾರಿಯಾಗಿ ಅಭಿನಯಿಸಲ್ಪಟ್ಟಿದೆ. ‘ಸಂಸ್ಕಾರ’ದ ಒಟ್ಟಂದದ ಸಿದ್ಧಿಯನ್ನು ನೋಡಿದಾಗ, ಭಾರತೀಯ ಸಾಹಿತ್ಯರಂಗದಲ್ಲಿ ಕನ್ನಡದ ಪ್ರತಿನಿಧಿಯಾಗಿ ಬೆಳಗಬಲ್ಲ ಕೆಲವೇ ಕೃತಿಗಳಲ್ಲಿ ‘ಸಂಸ್ಕಾರ’ ಒಂದಾಗಿದೆ ಎಂದು ಖಚಿತವಾಗಿ ಹೇಳಬಹುದು.
-ಶಾಂತಿನಾಥ ದೇಸಾಯಿ
(‘ನವ್ಯ ಸಾಹಿತ್ಯ ದರ್ಶನ’ ಕೃತಿಯಿಂದ)
Attributes | |
eBook | https://play.google.com/store/books/details/U_R_Ananthamurthy_Samskaara?id=wCTnDwAAQBAJ |
Author | ಯು.ಆರ್. ಅನಂತಮೂರ್ತಿ |
Translator / Editor | |
Number of pages | 108 |
Year of Publication | 1st Edition- 1965, 15th Edition- 2020 |